ಈ ಬ್ಲಾಗ್ ಅನ್ನು ಹುಡುಕಿ

ಮಂಗಳವಾರ, ಜೂನ್ 7, 2011

hattu tale,magu,aasharya,mahile,kudure mattu kappe,gulaabi appuge







akrama ganigaarike

ಬಳ್ಳಾರಿ, ಜೂ 7: ಸುಪ್ರೀಂಕೋರ್ಟು ನಿರ್ದೇಶನದ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳ ತಂಡ ಹೊಸಪೇಟೆಯ ಐತಿಹಾಸಿಕ ಪ್ರಸಿದ್ಧ, ವಿಜಯನಗರ ಸಾಮ್ರಾಜ್ಯದರಸರ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ಜಂಬುನಾಥ ಬೆಟ್ಟದಲ್ಲಿರುವ ಐತಿಹಾಸಿಕ ಪ್ರಸಿದ್ಧಿ ಜಂಬುನಾಥ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ ಗಣಿಗಾರಿಕೆಯಿಂದ ಉಂಟಾಗಿರುವ ಅನಾಹುತ ಕುರಿತು ಪರಿಶೀಲನೆ ನಡೆಸಿತು.

ಜಂಬುನಾಥ ಬೆಟ್ಟದಲ್ಲಿರುವ ಐತಿಹಾಸಿಕ ಪ್ರಸಿದ್ಧಿ ಜಂಬುನಾಥ ದೇವಸ್ಥಾನದ ಸುತ್ತಲೂ ಅವ್ಯಾಹತವಾಗಿ ನಡೆಯುತ್ತಿರುವ ಗಣಿಗಾರಿಕೆಯಿಂದ ದೇವಸ್ಥಾನ ಶಿಥಿಲವಾಗಿ ಭಕ್ತರ ಶ್ರದ್ಧೆ - ಭಕ್ತಿಗಳಿಗೆ ಅಸಮಾಧಾನ ಉಂಟಾಗುತ್ತಿದೆ ಎಂದು ಸುಪ್ರೀಂಕೋರ್ಟ್‌ನಲ್ಲಿ ದಾಖಲಿಸಲಾಗಿದ್ದ ಸಾರ್ವಜನಿಕ ಹಿತಾಶಕ್ತಿ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಭಾರತೀಯ ಪುರಾತತ್ವ ಇಲಾಖೆಗೆ ಸೂಚಿಸಿತ್ತು.

ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳ ತಂಡ, ರಾಜ್ಯ ಪುರಾತತ್ವ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪುರಾತತ್ವ ತಜ್ಞರ ತಂಡ ಸೋಮವಾರ ಬೆಳಗ್ಗೆ ೧೦ ಗಂಟೆ ಸುಮಾರಿಗೆ ‘ಹಂಪೆ ಪ್ರದೇಶಾಭಿವೃದ್ಧಿ ಪ್ರಾಧಿಕಾರ’ದ ಸಭಾಂಗಣದಲ್ಲಿ ಸಭೆ ನಡೆಸಿ, ಸಾಕಷ್ಟು ದಾಖಲೆಗಳನ್ನು ಪರಿಶೀಲಿಸಿ ಜಂಬುನಾಥ ಗುಡ್ಡ ಮತ್ತು ದೇವಸ್ಥಾನಕ್ಕೆ ಭೇಟಿ ನೀಡಿತ್ತು. ದೇವಸ್ಥಾನಕ್ಕೆ ಭೇಟಿ ನೀಡಿದ್ದ ತಂಡದ ಸದಸ್ಯರು ಜಂಬುನಾಥ ದೇವಸ್ಥಾನ ಸೇರಿ ಸ್ಮಾರಕಗಳನ್ನು ವಿವರವಾಗಿ ಪರಿಶೀಲಿಸಿ, ಛಾಯಾಚಿತ್ರ ತೆಗೆದರು.

ಆ ನಂತರ ದೇವಸ್ಥಾನದ ಅರ್ಚಕ ಆನಂದ ಸ್ವಾಮಿ, ಅಲ್ಲಿಯ ನಿವಾಸಿ ಶಿಲ್ಪ ಅವರಿಂದ ಗಣಿಗಾರಿಕೆಯ ಕುರಿತು ಮಾಹಿತಿ ಸಂಗ್ರಹ ಮಾಡಿದರು. ದೇವಸ್ಥಾನದ ಗರ್ಭಗುಡಿ, ಕಂಭಗಳು, ನೀರು ಕಾಣದ ಬಾವಿ, ಸ್ಥಳ ಮಹಿಮೆ, ಐತಿಹಾಸಿಕ - ಧಾರ್ಮಿಕ ಶಕ್ತಿಗಳ ಮಾಹಿತಿಗಳನ್ನು ಪಡೆದು, ಗಣಿಗಾರಿಕೆಯಿಂದ ದೇವಸ್ಥಾನದಲ್ಲಿ ಉಂಟಾಗಿರುವ ಬಿರುಕುಗಳನ್ನು ಪರಿಶೀಲಿಸಿ ದಾಖಲಿಸಿಕೊಂಡರು.

ಜಂಬುನಾಥನ ಬೆಟ್ಟದಲ್ಲಿ ದೇವಸ್ಥಾನಕ್ಕೆ ಪಕ್ಕದಲ್ಲೇ ಆರ್. ಪೊಂಪಾಪತಿ (ಆರ್‌ಪಿಪಿ) ಮೈನ್ಸ್ ಕಂಪನಿ ಗಣಿಗಾರಿಕೆ ನಡೆಸುತ್ತಿದ್ದು, ಈ ಪ್ರದೇಶಕ್ಕೆ ತೆರಳಿದ ತಂಡ ಸದಸ್ಯರು ಗಣಿ ಗುತ್ತಿಗೆದಾರರಿಂದ ಸಾಕಷ್ಟು ಮಾಹಿತಿಯನ್ನು ಸಂಗ್ರಹ ಮಾಡಿದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಈ ತಂಡದ ಸದಸ್ಯರು, ಸುಪ್ರೀಂಕೋರ್ಟ್ ೩ ತಿಂಗಳಲ್ಲಿ ವರದಿ ಸಲ್ಲಿಸಲು ತಿಳಿಸಿದೆ. ಈ ಹಿನ್ನಲೆಯಲ್ಲಿ ವಿವಿಧ ಹಂತಗಳಲ್ಲಿ ಅಧಿಕಾರಿಗಳ, ಸಾರ್ವಜನಿಕರ ಹಾಗೂ ಭಕ್ತರ ಸಭೆಗಳನ್ನು ನಡೆಸಿ ಈ ಕುರಿತು ವರದಿ ಸಲ್ಲಿಸಲಾಗುತ್ತದೆ ಎಂದರು
God hatra hogi jaaga kelde,

'bhomi' ne kotta!

Rose kelde 'thota' ne kotta!

Nir kelde

'samudra' ne kotta!

"SNEHA" kelde

'Number' kotta!!!9886171210

nakku nali.......nodi kali

ಹುಡುಗ : ಐ ಲವ್ ಯೂ
ಹುಡುಗಿ : ಜಾಡಿಸಿ ಒದ್ಯಾ ಅಂದ್ರ ಬಿಜಾಪುರ ಒಳಗ ಹೋಗಿ ಬಿದ್ರಿರ್ತಿ ಮಗನಾ.
ಹುಡುಗ : ಸ್ವಲ್ಪ ಹಗುರ ಒದಿವಾ 'ತಂಗಿ', ನನಗ ಬಾಗಲಕೋಟಿದಾಗ ಸ್ವಲ್ಪ ಕೆಲಸಾ ಐತಿ!

ಭಾನುವಾರ, ಜೂನ್ 5, 2011

Santana
 maga phone nalli: ivattu nanna maga school ge barodilla.

Teacher: neevu yaaru maatanaadodu

Santana maga: nammappa maataadtaa irodu

ರವಿ ಬೆಳಗೆರೆಯವರು ಕವಿಗಳು ಕಾದಂಬರಿಕಾರರು  ಹಾಗು ಪತ್ರಕರ್ತರು
ಹುಟ್ಟಿದ್ದು ಬಳ್ಳಾರಿಯ ಸತ್ಯನಾರಾಯಣ ಪೇಟೆಯಲ್ಲಿ
ಸದ್ಯ ಬೆಂಗಳೂರು ನಿವಾಸಿಗಲಾಗಿದ್ದಾರೆ
ಇವರು ಹೈ ಬೆಂಗಳೂರು ವಾರ ಪತ್ರ್ಕೆಯ ಸಂಪಾದಕರು ಹಾಗು ಮಾಲೀಕರು ಹೌದು

. ರವಿ ಬೆಳಗೆರೆಯವರು Crime Diary, ಕಾರ್ಯಕ್ರಮ ಜನಪ್ರಿಯವಾಗಿದೆ
 ಇ ತಿ ವಿ


ಬುಧವಾರ, ಮೇ 18, 2011

ಬಳ್ಳಾರಿಯ ನಂಬರ್ 1 ಹುಡುಗಿ ನಳಿನಿ 99.2%

Nalini H, BellarySSLC li ಈಬಾರಿಯ ವಾರ್ಷಿಕ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೇ ಪ್ರಥಮ ರ್‍ಯಾಂಕ್‌ಗಳಿಸಿದ್ದಾರೆ. ಒಬ್ಬರು ಹಾಸನದ ಅನಿಕೇತ್ ನಾರಾಯಣ. ಉಳಿದವರಿಬ್ಬರು ಬಳ್ಳಾರಿಯ ಬಾಲಭಾರತಿಯ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು. ಅಂದರೆ, ಪ್ರಥಮ ರ್‍ಯಾಂಕ್‌ನಲ್ಲಿ ಸಿಂಹಪಾಲು ಬಳ್ಳಾರಿಯದ್ದು. ನಳಿನಿಯವರು ತಾವು ಪಟ್ಟ ಶ್ರಮ, ಹಿರಿಯರ ಹಾರೈಕೆ, ಕನಸುಗಳನ್ನು ದಟ್ಸ್ ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ.

ಬಳ್ಳಾರಿ, ಮೇ. 12 : "ಅಕ್ಕನ ಓದು, ಮಿತ್ರರ ಪೈಪೋಟಿ, ಶಿಕ್ಷಕರ ಪ್ರೇರಣೆ - ಪ್ರೋತ್ಸಾಹ, ಪೋಷಕರ ಬೆಂಬಲ ಎಲ್ಲವೂ ಸೇರಿ ನನ್ನನ್ನು ಓದಿಗೆ ಉತ್ತೇಜಿಸುತ್ತಿದ್ದವು. ರಾಜ್ಯಕ್ಕೇ ಫಸ್ಟ್ ಬಂದೆ. ಖುಷಿ ಆಗ್ತಿದೆ. ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ" ಇದು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 99.2ರಷ್ಟು ಅಂಕಗಳಿಸಿ ರಾಜ್ಯಕ್ಕೇ ಪ್ರಥಮ ರ್‍ಯಾಂಕ್ ಮುಡಿಗೇರಿಸಿಕೊಂಡಿರುವ ಬಳ್ಳಾರಿಯ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 
(ಬಾಲಭಾರತಿ) ವಿದ್ಯಾರ್ಥಿನಿ ಎಚ್. ನಳಿನಿಯ ಅಂತರಾಳದ ಮಾತುಗಳು. ಆನಂದದ ನುಡಿ 
ಬಳ್ಳಾರಿ ತಾಲೂಕಿನ ಮೋಕಾ ಸಮೀಪದ ಮೋಕಾ ಪಕ್ಕದ ಗೋಟೂರು ಗ್ರಾಮ ಸ್ವಂತ ಊರು. ತಂದೆ ಎಚ್. ಮಲ್ಲಾರೆಡ್ಡಿ, ಪ್ರಗತಿ ಗ್ರಾಮೀಣ ಬ್ಯಾಂಕ್‌ನ ಕ್ಯಾಷಿಯರ್ ಕಂ ಕ್ಲರ್ಕ್. ತಾಯಿ ಎಚ್. ಶಾಂತ ಗೃಹಿಣಿ. ಮಧ್ಯಮ ವರ್ಗದ ಶಿಕ್ಷಣ ಪಡೆದ ಕುಟುಂಬ. ಎಚ್. ನಳಿನಿಯ ಅಕ್ಕ ಎಚ್. ರಾಜೇಶ್ವರಿ ಎಸ್‌ಎಸ್‌ಎಲ್‌ಸಿಯಲ್ಲಿ ಜಿಲ್ಲೆಗೇ ದ್ವಿತೀಯ, ಶಾಲೆಗೆ ಫಸ್ಟ್ ಸ್ಥಾನ ಪಡೆದಿದ್ದರು
ದಿನದ 4ರಿಂದ 5 ತಾಸು ಓದಿನಲ್ಲಿರುತ್ತಿದ್ದ ನಳಿನಿ ಗಣಿತ ವಿಷಯಕ್ಕಾಗಿ ಪುರುಷೋತ್ತಮ ಅವರಲ್ಲಿ ಮನೆಪಾಠಕ್ಕೆ ಹೋಗಿದ್ದಾಳೆ. ಓದಿನ ಜೊತೆ ಜೊತೆ ಮನೆಗೆಲಸ, ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಈಕೆಗೆ ಓದಿನಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ತಾವು ಕಲಿತಿದ್ದನ್ನು ಕಲಿಸುವ ಆಸಕ್ತಿ, ಕಲಿಯದೇ ಇರುವುದನ್ನು ಶಿಕ್ಷಕರಿಂದ, ಮಿತ್ರರಿಂದ ಅರ್ಥ ಆಗುವವರೆಗೂ ಕಲಿಯುವ ಛಲ, ಹಠ.

ಹಿರಿಯಕ್ಕ ಎಚ್. ರಾಜೇಶ್ವರಿ, "ಬಹಳ ಕಷ್ಟಪಟ್ಟು ಓದಿದ್ಲು. ನಳಿನಿ ರಾಜ್ಯಕ್ಕೇ ಫಸ್ಟ್ ಬಂದಿದ್ದಕ್ಕೆ ಖುಷಿ ಆಗ್ತಿದೆ. ನಾನೀಗ ಬಳ್ಳಾರಿಯ ರಾವ್‌ಬಹುದ್ದೂರ್ ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ. ನನ್ನ ಸಾಧನೆಯೇ ನನಗೆ ಖುಷಿ ನೀಡಿತ್ತು. ಇನ್ನು ತಂಗಿ ಸಾಧನೆ ನನಗೆ ಕೀರ್ತಿ, ಗೌರವ, ಪ್ರತಿಷ್ಠೆಗಳನ್ನು ಹೆಚ್ಚಿಸಲಿದೆ. ನಳಿನಿ, 'ಐ ವಿಶ್ ಯು ಆಲ್ ದಿ ಬೆಸ್ಟ್'" ಎನ್ನುತ್ತಾರೆ.

ನೀವೂ ವಿಷ್ ಮಾಡಬೇಕೆ? ಕರೆ ಮಾಡಿ ಎಚ್. ಮಲ್ಲಾರೆಡ್ಡಿ - 94499 50535.

BALLARI VISHWAAS


ವಿಶಾಲ್, ಬಳ್ಳಾರಿಗೆ ಮಾತ್ರವಲ್ಲ ಕರ್ನಾಟಕಕ್ಕೂ ಬೆಸ್ಟ್


Vishal G, Bellary
ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿ, ಬಳ್ಳಾರಿಗೆ ಮಾತ್ರವಲ್ಲ ಕರ್ನಾಟಕಕ್ಕೂ ಹೆಮ್ಮೆ ತಂದಿರುವ ಜಿರಂಕಳಿ ವಿಶಾಲ್ ಅವರು ತಮ್ಮ ಹವ್ಯಾಸ, ಆಟ-ಪಾಠ, ಕನಸುಗಳ ಕುರಿತು ದಟ್ಸ್ ಕನ್ನಡದೊಡನೆ ಮಾತನಾಡಿದ್ದಾರೆ. ಅವರ ಸಾಧನೆ ಇನ್ನಿತರ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಲಿ. ಮನಸ್ಸಿದ್ದಲ್ಲಿ ಮಾರ್ಗವಿದ್ದೇ ಇದೆ ಎಂಬುದನ್ನು ವಿಶಾಲ್ ಇಡೀ ರಾಜ್ಯಕ್ಕೆ ಸಾಧಿಸಿ ತೋರಿಸಿದ್ದಾರೆ. ಅವರಿಗೆ ಶುಭವಾಗಲಿ.

ಬಳ್ಳಾರಿ, ಮೇ. 12 : `ಚೆನ್ನಾಗಿಯೇ ಓದ್ತಿದ್ದೆ. ರ್‍ಯಾಂಕ್ ಬಂದಿದೆ. ಆಟ - ಪಠ್ಯ, ಕ್ವಿಜ್‌ಗಳಲ್ಲೂ ಪಾಲ್ಗೊಳ್ಳುತ್ತಿದ್ದೆ. 620 ಮಾರ್ಕ್‌ಗಳು ಬಂದಿವೆ. ಖುಷಿ ಆಗ್ತಿದೆ' ಎಂದು ಹರ್ಷ ವ್ಯಕ್ತಪಡಿಸುತ್ತಾನೆ ಜಿರಂಕಳಿ ವಿಶಾಲ್.

ಬಳ್ಳಾರಿಯ ಬಾಲಭಾರತಿಯ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಜೆ. ವಿಶಾಲ್ ತಂದೆ ಗೈನಕಾಲಜಿಸ್ಟ್ ಡಾ. ಶಂಕರ್, ತಾಯಿ ಕಾನೂನು ಪದವೀಧರೆ, ಗೃಹಿಣಿ ಕಲ್ಪನ. ಶಿಕ್ಷಣವೇ ಕುಟುಂಬದ ಆಸ್ತಿ, ಸಾಧನೆ. ಐದು ವರ್ಷಗಳ ಕಾಲ ಮಿಲಿಟರಿಯಲ್ಲಿ ಕ್ಯಾಪ್ಟನ್ ಆಗಿ ದೇಶಸೇವೆ ಮಾಡಿದ್ದ ಡಾ. ಶಂಕರ್ ನಿವೃತ್ತಿ ನಂತರ ಜನಸೇವೆಗೆ ಆಯ್ಕೆ ಮಾಡಿಕೊಂಡಿದ್ದು ವೈದ್ಯ ವೃತ್ತಿಯನ್ನು.

ಮನೆಪಾಠಕ್ಕೆ ಹೋಗಿ ಗೊತ್ತಿಲ್ಲ. ಶಾಲೆಯ ನಂತರ ಮನೆಯೇ ಪಾಠಶಾಲೆ. ಕಷ್ಟಪಟ್ಟು ಓದಿದ್ದೇನೆ, ಆಟವನ್ನೂ ಆಡಿ ಕುಣಿದು, ಕುಪ್ಪಳಿಸಿ ನಲಿದಿದ್ದೇನೆ. ದೈಹಿಕವಾಗಿ ದಣಿದೇ ಪುಸ್ತಕ ಹಿಡಿಯುತ್ತಿದ್ದೆ. ನಾನು ಪುಸ್ತಕದ ಬದನೆಕಾಯಿ ಆಗಲು ಇಚ್ಛಿಸಲಿಲ್ಲ. ವಿವಿಧ ವಿಷಯ, ವಿಶೇಷಗಳತ್ತ ಆಸಕ್ತಿ ತೋರಿದ್ದೆ ಎನ್ನುತ್ತಾನೆ ಜೆ. ವಿಶಾಲ್. ತಂದೆ ಡಾ. ಜೆ. ಶಂಕರ್ `ಮಗನ ಆಸಕ್ತಿ, ಕಲಿಕೆಗೆ ನಾವು ಮುಕ್ತ ಅವಕಾಶ ನೀಡಿದ್ದೆವು. ಮಗನೂ ನಾವು ನೀಡಿದ್ದ ಮುಕ್ತತೆಯನ್ನು ಸದುಪಯೋಗ ಮಾಡಿಕೊಂಡಿದ್ದಾನೆ. ಆಟದ ಜೊತೆ ಪಾಠವನ್ನೂ ಕಲಿತಿದ್ದಾನೆ. ಖುಷಿ - ಹೆಮ್ಮೆ ಇದೆ' ಎಂದು ಮಗನ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಾಲ್ಯದಿಂದಲೇ ಮಕ್ಕಳಲ್ಲಿ ಶಿಸ್ತು, ಸಂಯಮ ಮತ್ತು ಕಠಿಣ ಪರಿಶ್ರಮದ ಪುರಸ್ಕಾರದ ಕನಸುಗಳನ್ನು, ಆಸೆ - ಆಕಾಂಕ್ಷೆಗಳನ್ನು ಬಿತ್ತಿದ್ದ ಶಂಕರ್ ತಮ್ಮ ಇಬ್ಬರು ಮಕ್ಕಳ ಬಗ್ಗೆ ಅಪಾರ ಹೆಮ್ಮೆ, ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ವಿಶಾಲ್ ತಾಯಿ ಜೆ. ಕಲ್ಪನ `ಮಗನ ಈ ಸಾಧನೆಯಿಂದ ಸಂತೋಷವಾಗಿದೆ. ಉನ್ನತ ಶಿಕ್ಷಣ ಪಡೆದ ನಾವೆಲ್ಲರೂ ಕಲಿಕೆಗೇ ಹೆಚ್ಚಿನ ಆಸಕ್ತಿ ತೋರಿದವರು. ತಂದೆಯಂತೆ ಮಗ ಮೆಡಿಕಲ್ ಓದುವ ಆಸಕ್ತಿ ಹೊಂದಿದ್ದಾನೆ. ಜನಸೇವೆ ಮಾಡುವ ಗುರಿ ಇದೆ. ನಾವೂ ಓದಿಸ್ತೇವೆ' ಎಂದು ಹರ್ಷ ವ್ಯಕ್ತಪಡಿಸಿದರು.

ಈ ದಂಪತಿಗಳ ಮೊದಲ ಪುತ್ರ ಜೆ. ವಿವೇಕ್ ಕೂಡ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 94ರಷ್ಟು ಅಂಕ ಗಳಿಸಿದ್ದಾನೆ. ಸಿಇಟಿಯಲ್ಲಿ 800ನೇ ರ್‍ಯಾಂಕ್ ಪಡೆದು ಪ್ರಸ್ತುತ ಬೆಳಗಾವಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ. ಜೆ. ವಿಶಾಲ್‌ಗೆ ಶಾಲೆಯ ಆಡಳಿತ ಮಂಡಲಿ `ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್' ಮತ್ತು `ಬೆಸ್ಟ್ ಔಟ್ ಗೋಯಿಂಗ್ ಆಲ್ ರೌಂಡ್ ಸ್ಟೂಡೆಂಟ್' ಪ್ರಶಸ್ತಿಗಳನ್ನು ನೀಡಿತ್ತು. ಕ್ವಿಜ್, ಚೆಸ್ ಸ್ಪರ್ಧೆಗಲ್ಲಿ ಪಾಲ್ಗೊಂಡಿದ್ದ ಈತನು ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿದ್ದಾನೆ.

ನೀವು ವಿಶ್ ಮಾಡಲು ಡಾ. ಜೆ. ಶಂಕರ್ : 94499 21269ಗೆ ಕರೆ ಮಾಡಿ. [ರು

ಶುಕ್ರವಾರ, ಏಪ್ರಿಲ್ 29, 2011