ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಮೇ 18, 2011

BALLARI VISHWAAS


ವಿಶಾಲ್, ಬಳ್ಳಾರಿಗೆ ಮಾತ್ರವಲ್ಲ ಕರ್ನಾಟಕಕ್ಕೂ ಬೆಸ್ಟ್


Vishal G, Bellary
ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿ, ಬಳ್ಳಾರಿಗೆ ಮಾತ್ರವಲ್ಲ ಕರ್ನಾಟಕಕ್ಕೂ ಹೆಮ್ಮೆ ತಂದಿರುವ ಜಿರಂಕಳಿ ವಿಶಾಲ್ ಅವರು ತಮ್ಮ ಹವ್ಯಾಸ, ಆಟ-ಪಾಠ, ಕನಸುಗಳ ಕುರಿತು ದಟ್ಸ್ ಕನ್ನಡದೊಡನೆ ಮಾತನಾಡಿದ್ದಾರೆ. ಅವರ ಸಾಧನೆ ಇನ್ನಿತರ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಲಿ. ಮನಸ್ಸಿದ್ದಲ್ಲಿ ಮಾರ್ಗವಿದ್ದೇ ಇದೆ ಎಂಬುದನ್ನು ವಿಶಾಲ್ ಇಡೀ ರಾಜ್ಯಕ್ಕೆ ಸಾಧಿಸಿ ತೋರಿಸಿದ್ದಾರೆ. ಅವರಿಗೆ ಶುಭವಾಗಲಿ.

ಬಳ್ಳಾರಿ, ಮೇ. 12 : `ಚೆನ್ನಾಗಿಯೇ ಓದ್ತಿದ್ದೆ. ರ್‍ಯಾಂಕ್ ಬಂದಿದೆ. ಆಟ - ಪಠ್ಯ, ಕ್ವಿಜ್‌ಗಳಲ್ಲೂ ಪಾಲ್ಗೊಳ್ಳುತ್ತಿದ್ದೆ. 620 ಮಾರ್ಕ್‌ಗಳು ಬಂದಿವೆ. ಖುಷಿ ಆಗ್ತಿದೆ' ಎಂದು ಹರ್ಷ ವ್ಯಕ್ತಪಡಿಸುತ್ತಾನೆ ಜಿರಂಕಳಿ ವಿಶಾಲ್.

ಬಳ್ಳಾರಿಯ ಬಾಲಭಾರತಿಯ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಜೆ. ವಿಶಾಲ್ ತಂದೆ ಗೈನಕಾಲಜಿಸ್ಟ್ ಡಾ. ಶಂಕರ್, ತಾಯಿ ಕಾನೂನು ಪದವೀಧರೆ, ಗೃಹಿಣಿ ಕಲ್ಪನ. ಶಿಕ್ಷಣವೇ ಕುಟುಂಬದ ಆಸ್ತಿ, ಸಾಧನೆ. ಐದು ವರ್ಷಗಳ ಕಾಲ ಮಿಲಿಟರಿಯಲ್ಲಿ ಕ್ಯಾಪ್ಟನ್ ಆಗಿ ದೇಶಸೇವೆ ಮಾಡಿದ್ದ ಡಾ. ಶಂಕರ್ ನಿವೃತ್ತಿ ನಂತರ ಜನಸೇವೆಗೆ ಆಯ್ಕೆ ಮಾಡಿಕೊಂಡಿದ್ದು ವೈದ್ಯ ವೃತ್ತಿಯನ್ನು.

ಮನೆಪಾಠಕ್ಕೆ ಹೋಗಿ ಗೊತ್ತಿಲ್ಲ. ಶಾಲೆಯ ನಂತರ ಮನೆಯೇ ಪಾಠಶಾಲೆ. ಕಷ್ಟಪಟ್ಟು ಓದಿದ್ದೇನೆ, ಆಟವನ್ನೂ ಆಡಿ ಕುಣಿದು, ಕುಪ್ಪಳಿಸಿ ನಲಿದಿದ್ದೇನೆ. ದೈಹಿಕವಾಗಿ ದಣಿದೇ ಪುಸ್ತಕ ಹಿಡಿಯುತ್ತಿದ್ದೆ. ನಾನು ಪುಸ್ತಕದ ಬದನೆಕಾಯಿ ಆಗಲು ಇಚ್ಛಿಸಲಿಲ್ಲ. ವಿವಿಧ ವಿಷಯ, ವಿಶೇಷಗಳತ್ತ ಆಸಕ್ತಿ ತೋರಿದ್ದೆ ಎನ್ನುತ್ತಾನೆ ಜೆ. ವಿಶಾಲ್. ತಂದೆ ಡಾ. ಜೆ. ಶಂಕರ್ `ಮಗನ ಆಸಕ್ತಿ, ಕಲಿಕೆಗೆ ನಾವು ಮುಕ್ತ ಅವಕಾಶ ನೀಡಿದ್ದೆವು. ಮಗನೂ ನಾವು ನೀಡಿದ್ದ ಮುಕ್ತತೆಯನ್ನು ಸದುಪಯೋಗ ಮಾಡಿಕೊಂಡಿದ್ದಾನೆ. ಆಟದ ಜೊತೆ ಪಾಠವನ್ನೂ ಕಲಿತಿದ್ದಾನೆ. ಖುಷಿ - ಹೆಮ್ಮೆ ಇದೆ' ಎಂದು ಮಗನ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಾಲ್ಯದಿಂದಲೇ ಮಕ್ಕಳಲ್ಲಿ ಶಿಸ್ತು, ಸಂಯಮ ಮತ್ತು ಕಠಿಣ ಪರಿಶ್ರಮದ ಪುರಸ್ಕಾರದ ಕನಸುಗಳನ್ನು, ಆಸೆ - ಆಕಾಂಕ್ಷೆಗಳನ್ನು ಬಿತ್ತಿದ್ದ ಶಂಕರ್ ತಮ್ಮ ಇಬ್ಬರು ಮಕ್ಕಳ ಬಗ್ಗೆ ಅಪಾರ ಹೆಮ್ಮೆ, ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ವಿಶಾಲ್ ತಾಯಿ ಜೆ. ಕಲ್ಪನ `ಮಗನ ಈ ಸಾಧನೆಯಿಂದ ಸಂತೋಷವಾಗಿದೆ. ಉನ್ನತ ಶಿಕ್ಷಣ ಪಡೆದ ನಾವೆಲ್ಲರೂ ಕಲಿಕೆಗೇ ಹೆಚ್ಚಿನ ಆಸಕ್ತಿ ತೋರಿದವರು. ತಂದೆಯಂತೆ ಮಗ ಮೆಡಿಕಲ್ ಓದುವ ಆಸಕ್ತಿ ಹೊಂದಿದ್ದಾನೆ. ಜನಸೇವೆ ಮಾಡುವ ಗುರಿ ಇದೆ. ನಾವೂ ಓದಿಸ್ತೇವೆ' ಎಂದು ಹರ್ಷ ವ್ಯಕ್ತಪಡಿಸಿದರು.

ಈ ದಂಪತಿಗಳ ಮೊದಲ ಪುತ್ರ ಜೆ. ವಿವೇಕ್ ಕೂಡ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 94ರಷ್ಟು ಅಂಕ ಗಳಿಸಿದ್ದಾನೆ. ಸಿಇಟಿಯಲ್ಲಿ 800ನೇ ರ್‍ಯಾಂಕ್ ಪಡೆದು ಪ್ರಸ್ತುತ ಬೆಳಗಾವಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ. ಜೆ. ವಿಶಾಲ್‌ಗೆ ಶಾಲೆಯ ಆಡಳಿತ ಮಂಡಲಿ `ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್' ಮತ್ತು `ಬೆಸ್ಟ್ ಔಟ್ ಗೋಯಿಂಗ್ ಆಲ್ ರೌಂಡ್ ಸ್ಟೂಡೆಂಟ್' ಪ್ರಶಸ್ತಿಗಳನ್ನು ನೀಡಿತ್ತು. ಕ್ವಿಜ್, ಚೆಸ್ ಸ್ಪರ್ಧೆಗಲ್ಲಿ ಪಾಲ್ಗೊಂಡಿದ್ದ ಈತನು ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿದ್ದಾನೆ.

ನೀವು ವಿಶ್ ಮಾಡಲು ಡಾ. ಜೆ. ಶಂಕರ್ : 94499 21269ಗೆ ಕರೆ ಮಾಡಿ. [ರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ