ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಮೇ 18, 2011

ಬಳ್ಳಾರಿಯ ನಂಬರ್ 1 ಹುಡುಗಿ ನಳಿನಿ 99.2%

Nalini H, BellarySSLC li ಈಬಾರಿಯ ವಾರ್ಷಿಕ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೇ ಪ್ರಥಮ ರ್‍ಯಾಂಕ್‌ಗಳಿಸಿದ್ದಾರೆ. ಒಬ್ಬರು ಹಾಸನದ ಅನಿಕೇತ್ ನಾರಾಯಣ. ಉಳಿದವರಿಬ್ಬರು ಬಳ್ಳಾರಿಯ ಬಾಲಭಾರತಿಯ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು. ಅಂದರೆ, ಪ್ರಥಮ ರ್‍ಯಾಂಕ್‌ನಲ್ಲಿ ಸಿಂಹಪಾಲು ಬಳ್ಳಾರಿಯದ್ದು. ನಳಿನಿಯವರು ತಾವು ಪಟ್ಟ ಶ್ರಮ, ಹಿರಿಯರ ಹಾರೈಕೆ, ಕನಸುಗಳನ್ನು ದಟ್ಸ್ ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ.

ಬಳ್ಳಾರಿ, ಮೇ. 12 : "ಅಕ್ಕನ ಓದು, ಮಿತ್ರರ ಪೈಪೋಟಿ, ಶಿಕ್ಷಕರ ಪ್ರೇರಣೆ - ಪ್ರೋತ್ಸಾಹ, ಪೋಷಕರ ಬೆಂಬಲ ಎಲ್ಲವೂ ಸೇರಿ ನನ್ನನ್ನು ಓದಿಗೆ ಉತ್ತೇಜಿಸುತ್ತಿದ್ದವು. ರಾಜ್ಯಕ್ಕೇ ಫಸ್ಟ್ ಬಂದೆ. ಖುಷಿ ಆಗ್ತಿದೆ. ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ" ಇದು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 99.2ರಷ್ಟು ಅಂಕಗಳಿಸಿ ರಾಜ್ಯಕ್ಕೇ ಪ್ರಥಮ ರ್‍ಯಾಂಕ್ ಮುಡಿಗೇರಿಸಿಕೊಂಡಿರುವ ಬಳ್ಳಾರಿಯ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 
(ಬಾಲಭಾರತಿ) ವಿದ್ಯಾರ್ಥಿನಿ ಎಚ್. ನಳಿನಿಯ ಅಂತರಾಳದ ಮಾತುಗಳು. ಆನಂದದ ನುಡಿ 
ಬಳ್ಳಾರಿ ತಾಲೂಕಿನ ಮೋಕಾ ಸಮೀಪದ ಮೋಕಾ ಪಕ್ಕದ ಗೋಟೂರು ಗ್ರಾಮ ಸ್ವಂತ ಊರು. ತಂದೆ ಎಚ್. ಮಲ್ಲಾರೆಡ್ಡಿ, ಪ್ರಗತಿ ಗ್ರಾಮೀಣ ಬ್ಯಾಂಕ್‌ನ ಕ್ಯಾಷಿಯರ್ ಕಂ ಕ್ಲರ್ಕ್. ತಾಯಿ ಎಚ್. ಶಾಂತ ಗೃಹಿಣಿ. ಮಧ್ಯಮ ವರ್ಗದ ಶಿಕ್ಷಣ ಪಡೆದ ಕುಟುಂಬ. ಎಚ್. ನಳಿನಿಯ ಅಕ್ಕ ಎಚ್. ರಾಜೇಶ್ವರಿ ಎಸ್‌ಎಸ್‌ಎಲ್‌ಸಿಯಲ್ಲಿ ಜಿಲ್ಲೆಗೇ ದ್ವಿತೀಯ, ಶಾಲೆಗೆ ಫಸ್ಟ್ ಸ್ಥಾನ ಪಡೆದಿದ್ದರು
ದಿನದ 4ರಿಂದ 5 ತಾಸು ಓದಿನಲ್ಲಿರುತ್ತಿದ್ದ ನಳಿನಿ ಗಣಿತ ವಿಷಯಕ್ಕಾಗಿ ಪುರುಷೋತ್ತಮ ಅವರಲ್ಲಿ ಮನೆಪಾಠಕ್ಕೆ ಹೋಗಿದ್ದಾಳೆ. ಓದಿನ ಜೊತೆ ಜೊತೆ ಮನೆಗೆಲಸ, ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಈಕೆಗೆ ಓದಿನಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ತಾವು ಕಲಿತಿದ್ದನ್ನು ಕಲಿಸುವ ಆಸಕ್ತಿ, ಕಲಿಯದೇ ಇರುವುದನ್ನು ಶಿಕ್ಷಕರಿಂದ, ಮಿತ್ರರಿಂದ ಅರ್ಥ ಆಗುವವರೆಗೂ ಕಲಿಯುವ ಛಲ, ಹಠ.

ಹಿರಿಯಕ್ಕ ಎಚ್. ರಾಜೇಶ್ವರಿ, "ಬಹಳ ಕಷ್ಟಪಟ್ಟು ಓದಿದ್ಲು. ನಳಿನಿ ರಾಜ್ಯಕ್ಕೇ ಫಸ್ಟ್ ಬಂದಿದ್ದಕ್ಕೆ ಖುಷಿ ಆಗ್ತಿದೆ. ನಾನೀಗ ಬಳ್ಳಾರಿಯ ರಾವ್‌ಬಹುದ್ದೂರ್ ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ. ನನ್ನ ಸಾಧನೆಯೇ ನನಗೆ ಖುಷಿ ನೀಡಿತ್ತು. ಇನ್ನು ತಂಗಿ ಸಾಧನೆ ನನಗೆ ಕೀರ್ತಿ, ಗೌರವ, ಪ್ರತಿಷ್ಠೆಗಳನ್ನು ಹೆಚ್ಚಿಸಲಿದೆ. ನಳಿನಿ, 'ಐ ವಿಶ್ ಯು ಆಲ್ ದಿ ಬೆಸ್ಟ್'" ಎನ್ನುತ್ತಾರೆ.

ನೀವೂ ವಿಷ್ ಮಾಡಬೇಕೆ? ಕರೆ ಮಾಡಿ ಎಚ್. ಮಲ್ಲಾರೆಡ್ಡಿ - 94499 50535.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ